Saturday, 21 May 2016

ಕನ್ನಡ ಜಾನಪದ ಪರಿಷತ್ -ಧ್ಯೇಯೋದ್ದೇಶಗಳು                                


                    ಪ್ರಸ್ತಾವನೆ

ಬೆಳಗಾಗೆದ್ದು ಯಾರ್ ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳಿಯೋ ಭೂಮಿತಾಯಿ
ಎದ್ದೊಂದು ಗಳಿಗೆ ನೆನೆದೇನು

ತೊಟ್ಟಿಲು ಹೊತ್ಕೊಂಡು ತವರ್ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೋಡ್ಕೊಂಡು | ತೌರೂರ
ತಿಟ್ಟಹತ್ತಿ ತಿರುಗಿ ನೋಡ್ಯಾಳ
ಇಂಥ ಅಪೂರ್ವ ಜನಪದ ಕವಿಗಳ ರಚನೆಗಳು ಯಾವ ಶಿಷ್ಟ ಶ್ರೇಷ್ಠ ಕವಿಯ ರಚನೆಗಳಿಗೂ ಕಡಿಮೆಯದೇನಲ್ಲ .ಇಂಥ ಅನೇಕ ಕಥೆ ಹಾಡುಗಳು,  ಒಗಟುಗಳು,  ಗಾದೆಗಳು,ಕುಣಿತಗಳು .ಆಟಗಳು ಸಮಷ್ಟಿಯಲ್ಲಿ ಬಾಯ್ದೆರೆಯಾಗಿ ಹರಡುತ್ತಾ ಬಂದಿವೆ .ಇವು ನಾವು ನಡೆದು ಬಂದ ಹೆಜ್ಜೆಗುರುತುಗಳು ಈ ರೀತಿಯಾಗಿ ಸಾವಿರಾರು ವರ್ಷಗಳಿಂದ ಮೌಖಿಕ ಸಂಪ್ರದಾಯಗಳ ಮೂಲಕ  ಬಾಯ್ದೆರೆಯಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿರುವ ಆಚರಣೆಗಳು ಆಹಾರ ಪದ್ಧತಿ ,ಹಾಡು ಹಸೆ ಕಲೆ,ಕುಣಿತಗಳು,ವೈದ್ಯ ಪದ್ದತಿಗಳು,ನಂಬಿಕೆಗಳು ,ಸಂಪ್ರದಾಯಗಳು,ಹಾಡುಗಳು,ಕರಕುಶಲ ಕಲೆಗಳು ಆಟಗಳು ಎಲ್ಲವನ್ನೂ ಒಟ್ಟಾಗಿ ಜಾನಪದ ಎನ್ನುತ್ತಾರೆ .ಇದು ಬಹಳ ವಿಸ್ತಾರವಾದುದು.
ಜಾನಪದ ಎಂದರೇನು ಎಂಬ ಬಗ್ಗೆ ಆಂಡ್ರೂಲಾಂಗ್ “"ಜನಾಂಗಗಳ ಪಳೆಯುಳಿಕೆಗಳನ್ನು ಸಮಗ್ರಹಿಸಿ ಅಧ್ಯಯನ ಮಾಡುವ ವಿಜ್ಞಾನ, ಜನ ಜೀವನದಲ್ಲಿ ಇಂದಿಗೂ ಕಂಡು ಬರುವುದು. ಆದರೆ ಈ ಕಾಲದಲ್ಲಿ ಕತೆಗಳನ್ನು ನಂಬಿಕೆಗಳನ್ನು ವಿಚಾರಗಳನ್ನು ಕುರಿತು ವಿಜ್ಞಾನ ಅಧ್ಯಯನ ಮಾಡುತ್ತದೆ. ಸಮಾಜದ ಮುಂತಾದವುಗಳ ಮೊತ್ತವೇ ಜಾನಪದಎಂದು ಹೇಳಿದ್ದರೆ ಎಡ್ವಿನ್ ಸಿಡ್ನಿ ಹಾರ್ಟಲ್ಯಾಂಡ್ "ಜಾನಪದ ಎನ್ನುವುದು ಸಂಪ್ರದಾಯದ ಪ್ರಜ್ಞೆ, ಅಂದರೆ ಪರಂಪರಾಗತ ಜ್ಞಾನವು ನೆನಪಿನ ರೂಪದಲ್ಲಿ ಕ್ರೀಯಾರೂಪದಲ್ಲಿ ಸಾಗಿಬರುವ ಪ್ರಕ್ರಿಯೆಯನ್ನು ಹಾರ್ಟಲ್ಯಾಂಡ್ ಸಂಪ್ರದಾಯ ಎಂದು ಹೇಳಿದ್ದಾರೆ . ಇ ಡಬ್ಲ್ಯೂ ವೊಗೆಲಿನ್ಮೌಖಿಕ ಸಂಪ್ರದಾಯದಲ್ಲಿ ಸಾಗಿಬಂದ ಯಾವುದೇ ಪರಂಪರಾನುಗತ ವಿಷಯವಾಗಿರುವ ಪದ್ಯ ಮತ್ತು ಗದ್ಯ ವಿಷಯವಾಗಿರಲಿ ಅದುವೇ ಜಾನಪದ ಎನ್ನುತ್ತೇವೆ. ಈತ ಜಾನಪದ ಮೂಲಗುಣ ಮೌಖಿಕ ಪ್ರಸರಣೆಎಂದು ಹೇಳಿದರೆ ಬಾರ್ಬೆ ಮೇರಿಯಸ್ಯಾವಾಗ ಹಿಂದಿನದಾದ ಜ್ಞಾನ ಅನುಭವ ಜಾಣ್ಮೆ ನೈಪುಣ್ಯ ಹವ್ಯಾಸಗಳು ಮತ್ತು ಅನುಸರಣಿಗಳು ಹಳೆಯ ತಲೆಮಾರಿನಿಂದ ಹೊಸ ತಲೆ ಮಾರಿಗೆ ಮಾತಿನ ಮೂಲಕ ಹಸ್ತಾಂತರಗೊಳಿಸುತ್ತವೆಯೋ ಇವು ಪುಸ್ತಕ ಅಚ್ಚು ವಿಷಯಗಳು ಆಗಿರುವುದಿಲ್ಲವೋ ಅಲ್ಲಿ ನಾವು ಜಾನಪದವನ್ನು ಕಾಣುತ್ತೇವೆಎಂದು ಹೇಳಿದ್ದಾರೆ
ಜಾನಪದದ ಅಧ್ಯಯನಕ್ಕೆ ಒಂದು ಶಿಸ್ತನ್ನು ಹಾಕಿಕೊಟ್ಟಿರುವ ಹಾ.ಮಾ.ನಾಯಕ ಅವರು ಜಾನಪದ ಲಿಖಿತ ದಾಖಲೆಗಿಂತ ಜನತೆಯ ಗ್ರಂಥಸ್ಥವಲ್ಲದ ಸಾಂಪ್ರದಾಯಿಕ ಮೊತ್ತ. ಸಂಪ್ರದಾಯವನ್ನು ಕುರಿತಾದ ವಿಜ್ಞಾನ ಯಾವುದೇ ಸಮಾಜದ ವಾಚಿಕ ಪರಂಪರೆಗಳ ಕಲೆ ಮತ್ತು ನಂಬಿಕೆಗಳ ಮೊತ್ತಎಂದು ಹೇಳಿದಾರೆ .ಜಾನಪದ ತಜ್ಞರಾದ ಜೀ.ಶಂ.ಪರಮಶಿವಯ್ಯನಾಗರಿಕತೆಗೂ ಮೂಲವಾದ ಶಿಷ್ಠ್ಯ ಸಂಸ್ಕ್ರತಿಯಿಂದ ದೂರವಾದ ಪರಂಪರಾನುಗತವಾದ ಬೆಳವಣಿಗೆಗಳು ಪಡೆದ ಜನಸಮುದಾಯದ ವಿಶಿಷ್ಟ ಸಂಸ್ಕೃತಿಯೇ ಜಾನಪದ.ಎಂದು ಅಭಿಪ್ರಾಯ ಪಟ್ಟಿದ್ದಾರೆ.ಅಂತೆಯೇ ಹಿರಿಯ ವಿದ್ವಾಂಸರಾದ ದೇ.ಜವರೇಗೌಡ
ಬಾಲ ಬಾಯಿಯಲ್ಲಿ ಬ್ರಹ್ಮಾಂಡವು ಅಡಗಿರುವಂತೆ ಜಾನಪದದಲ್ಲಿ ಎಲ್ಲವೂ ಅಡಗಿದೆಎಂದು ಹೇಳಿದ್ದಾರೆ. ಗೊ.ರು.ಚನ್ನಬಸವಪ್ಪಜನತೆಯ ನಾಲಿಗೆಯ ತೂಗು ತೊಟ್ಟಿಲಿನ ಮೇಲೆ ನರ್ತಿಸುತ್ತಾ ಜನಸಾಮಾನ್ಯರ ಸರ್ವತೋಮುಖ ಅಭಿವ್ಯಕ್ತಿಯಾಗಿದೆಎಂದು ಅಭಿಪ್ರಾಯ ಪಟ್ಟಿದ್ದಾರೆ.
ಜಾನಪದ ಲಕ್ಷ್ಮಣಗಳು :
ಸಹಸ್ರಾರು ವರ್ಷಗಳಿಂದ ಪೀಳಿಗೆಯಿಂದ ಪೀಳಿಗೆಗೆ ಬೆಳೆದು ಬಂದ ಪರಂಪರಾಗತ ಅನುಭವ ಜ್ಞಾನವನ್ನು ಹೊಂದಿರುವ ಮೌಖಿಕ ಪರಂಪರೆಯ ಜಾನಪದದ ಪ್ರಮುಖ ಎನಿಸಿದ ಹನ್ನೆರಡು ಲಕ್ಷಣಗಳನ್ನು  ವಿದ್ವಾಂಸರು ಈ ರೀತಿಯಾಗಿ ಪಟ್ಟಿ ಮಾಡಿದ್ದಾರೆ
1.   ಕಂಠಸ್ಥ ಸಂಪ್ರದಾಯ
2.   ಸಾಮೂಹಿಕ ಪುನರ್ ಸೃಷ್ಠಿ
3.   ವ್ಯಾಪಕತೆ
4.   ಸಜೀವವಾದದ್ದು
5.   ಪರಂಪರೆಯಿಂದ ಕೂಡಿದ್ದು
6.   ಸರಳತೆ, ಸ್ಪಷ್ಟತೆ
7.   ಪರಿವರ್ತನಾ ಶೀಲತೆ
8.   ವಿಶ್ವ ಮಾಲಿಕತೆ
9.   ಜಾನಪದ ಸಂಸ್ಕ್ರತಿಯ ಒಂದು ಭಾಗ
10 ಜಾನಪದ ಸರ್ವ ಸಾಮಾನ್ಯ ಬಳಕೆ
11 ಎಲ್ಲರ ಸಾಮಾನ್ಯ ಒಪ್ಪಿಗೆಯಾಗಿದೆ
12 ಜನಪ್ರಿಯ ಪರಂಪರೆಗಳ ಭಂಡಾರ
ಜನಪದ ಪ್ರಕಾರಗಳು
ಜಾನಪದ ಎಂಬುದು ಬಹಳ ವಿಸ್ತಾರವಾದ ಕ್ಷೇತ್ರ .ಇದರಲ್ಲಿ ಅದಕವಗುವ ಕೆಲವು ವಿಚಾರಗಳನ್ನು ಹೀಗೆ ಪಟ್ಟಿ ಮಾಡಬುಹುದು
1 ಜನಪದ ಕುಣಿತ ಮತ್ತು ಬಯಲಾಟಗಳು
1 ವೀರಗಾಸೆ
2 ಡೊಳ್ಳು ಕುಣಿತ
3 ಯಕ್ಷಗಾನ
4 ದೊಡ್ಡಾಟ
5 ಶ್ರೀ ಕೃಷ್ಣಪಾರಿಜಾತ
6  ಸಣ್ಣಾಟ
7 ಸೋಮನ ಕುಣಿತ
8 ಜಗ್ಗಲಿಗೆ ಮೇಳ
9 ಕುದುರೆ ಕುಣಿತ
10 ಬೀಸು ಕಂಸಾಳೆ ಕುಣಿತ
11 ಆಟಿ ಕಳಂಜ ಕುಣಿತ
12 ಕನ್ಯಾಪು
13ಚೆನ್ನು ಕುಣಿತ
14 ಕಾವೇರಿ ಪುರುಷ
15 ಸಿದ್ಧವೇಶ
16 ಕಂಗಿಲು ಕುಣಿತ
17 ಕರಂಗೋಲು
18 ಗೊಂದಲಿಗರ ಕಥೆಗಳು/ ನಿರೂಪಣಾತ್ಮಕ ಪ್ರದರ್ಶನ

ಇತ್ಯಾದಿಯಾಗಿ ಅನೇಕ ಪ್ರಕಾರಗಳ ಕುಣಿತ/ಪ್ರದರ್ಶಗಳಿವೆ
 2 ಜನಪದ ಕಥನ ಕಾವ್ಯಗಳು
1 ಹಾಲುಮತ ಪುರಾಣ
2 ಮಂಟೇಸ್ವಾಮಿ ಕಥಾಪ್ರಸಂಗ
3 ಮಲೆ ಮಹದೇಶ್ವರ ಸ್ವಾಮಿಯ ಪುರಾಣ
4 ಮೈಲಾರಲಿಂಗನ ಪುರಾಣ
5 ರೇವಣ ಸಾಂಗತ್ಯ
6 ಏಳು ಕೊಳ್ಳದ ಎಲ್ಲಮ್ಮನ ಪುರಾಣ
7 ತುಳುನಾಡಿನ ಜನಪದ ಕಾವ್ಯಗಳು/ಪಾಡ್ದನಗಳು
3 ಜಾನಪದ ಹಾಡುಗಳು:
1 ಕುಟ್ಟುವ ಹಾಡುಗಳು
2 ಬೀಸುವ ಹಾಡುಗಳು
3 ನಾಟಿ ಮಾಡುವಾಗಿನ ಹಾಡುಗಳು
4 ಹಬ್ಬದ ಸಮಯದ ಹಾಡುಗಳು
5 ಸೋಬಾನೆ ಹಾಡುಗಳು
6 ಲಾಲಿ /ಜೋಗುಳ ಹಾಡುಗಳು
 ಇತ್ಯಾದಿ 
4 ಜನಪದ ಕರಕುಶಲ ಕಲೆಗಳು
1 ತೊಗಲು ಬೊಂಬೆ ತಯಾರಿಸುವುದು
2 ಹಬ್ಬಗಳಲ್ಲಿ ಬಣ್ಣಗಾರಿಕೆ ಮತ್ತು ಚಿತ್ರಗಾರಿಕೆ
3 ಜನಪದ ಶೈಲಿಯ ನೇಯ್ಗೆ
4 ಲಂಬಾಣಿಗರ ಕರಕುಶಲ ಕಲೆ
5 ಜನಪದರ ಕಾಷ್ಠ ಉತ್ಪನ್ನಗಳು ಇತ್ಯಾದಿ
5 ಜಾನಪದ ವಾದ್ಯಗಳು
1 ಸೂರ್ಯ ವಾದ್ಯ-ಚಂದ್ರ ವಾದ್ಯ
12 ಡಕ್ಕೆ
3 ಡೋಲು
4 ತಮ್ಮಟೆ
5 ಕಿನ್ನರಿ ವಾದ್ಯಗಳು
5 ತಂಬೂರಿ ಇತ್ಯಾದಿ

6 ಜನಪದ ಕ್ರೀಡೆಗಳು
1 ಲಗೋರಿ
2 ಕುಂಟೇ ಬಿಲ್ಲೆ
3 ಮರಕೋತಿಯಾಟ
4 ಚಿನ್ನಿದಾಂಡು
5 ಹಗ್ಗ ಜಗ್ಗಾಟ
7ಹುಲಿ-ದನ
8 ಚೆನ್ನೆಮಣೆ
9ಕಾಯಿಕುಟ್ಟುವುದು
10 ಬುಗುರಿ
11 ಕಣ್ಣು ಮುಚ್ಚಾಲೆ
ಇತ್ಯಾದಿ
7 ಗೊಂಬೆಯಾಟಗಳು
1 ಕೀಲು ಗೊಂಬೆಯಾಟ
2 ಉತ್ತರ ಕರ್ನಾಟಕದ ಗೊಂಬೆಯಾಟಗಳು
3 ತೊಗಲು ಗೊಂಬೆಯಾಟ
4 ಗೊಂಬೆಯಾಟದಲ್ಲಿ ಯಕ್ಷಗಾನ
5 ದಕ್ಷಿಣ ಕರ್ನಾಟಕದ ಗೊಂಬೆಯಾಟಗಳು
6 ಸೂತ್ರದ ಗೊಂಬೆಯಾಟಗಳು ಇತ್ಯಾದಿ
8 ಹಬ್ಬಗಳು ಮತ್ತು ಸಂಪ್ರದಾಯಗಳು
1 ನಾಗ/ರ ಪಂಚಮಿ
2 ಹಟ್ಟಿಹಬ್ಬ (ಜಾನಪದ ದೀಪಾವಳಿ)
3 ಹಿರಿಯರ ಹಬ್ಬ
4 ಮಾಳದ ಅಮಾವಾಸ್ಯೆ
5 ಉಗಾದಿ
6 ದಸರೆಯ ಸಮಯದಲ್ಲಿ ಜಾನಪದ ಆಚರಣೆಗಳು
7 ಸಂಕ್ರಾಂತಿ ಇತ್ಯಾದಿ
9 ಜನಪದ ವೈದ್ಯಮತ್ತು ಮಂತ್ರ ಮೋಡಿಗಳು
1 ಬಣಜಾರರ ಮಂತ್ರವಿದ್ಯೆಗಳು
2 ಮೋಡಿ ವಿದ್ಯೆ ಮತ್ತು ರಣಮೋಡಿ
3 ಜನಪದರಲ್ಲಿ ಭವಿಷ್ಯ ಹೇಳುವ ವಿದ್ಯೆ
3 ಕಣಿಕಾರರು
4 ದರ್ಶನ ಇತ್ಯಾದಿ

ಕನ್ನಡ ಜಾನಪದ ಪರಿಷತ್  ನ ಧ್ಯೇಯೋದ್ದೇಶಗಳು
 ಕರ್ನಾಟಕದಲ್ಲಿ ಜಾನಪದ ಅಧ್ಯಯನ ಒಂದು ಪ್ರಮುಖ ಜ್ಞಾನಶಿಸ್ತಾಗಿ ಹೊರ ಹೊಮ್ಮಿದ್ದು. ಇದಕ್ಕೆ ಕನಿಷ್ಠ 150 ವರ್ಷಗಳ ಅಧ್ಯಯನದ ಇತಿಹಾಸವಿದೆ. ಈ ಕಾಲಘಟ್ಟದಲ್ಲಿ ಜಾನಪದವನ್ನು ತಿಳಿಯುವ, ವಿಶ್ಲೇಷಿಸುವ, ಸಮಾಜವನ್ನು ಅರ್ಥೈಸುವ ,ಸಂಸ್ಕೃತಿಯನ್ನು ನಿರ್ವಚಿಸುವ, ಚರಿತ್ರೆಯನ್ನು ಭಿನ್ನವಾಗಿ ಗ್ರಹಿಸುವಕಾರ್ಯಗಳುನಡೆಯಬೇಕಾಗಿದೆ ..
.ಜನಪದ ಸಾಹಿತ್ಯ ಕ್ರೀಡೆ ಆಚರಣೆ ಕಲೆ ವಾದ್ಯ ವೈದ್ಯ ಮೊದಲಾದ ಅನೇಕ ಪ್ರಕಾರಗಳ ಅಧ್ಯಯನ ಅಗತ್ಯವಾಗಿದೆ.ಆಧುನಿಕೀಕರಣ ಜಾಗತೀಕರಣಗಳ ವೇಗದ ಬದುಕಿನ ನಡುವೆ ತಮ್ಮತನವನ್ನು  ಕಳೆದುಕೊಳ್ಳುತ್ತಿರುವ ನಮ್ಮ ಸಮಾಜಕ್ಕೆ ಹಿಂದಿನ ಬೇರುಗಳನ್ನು ಸಂಸ್ಕೃತಿಯನ್ನು ಕಟ್ಟಿಕೊಡಲು ಜಾನಪದದ ತಲಸ್ಪರ್ಶಿ ಅಧ್ಯಯನ ಅತ್ಯಗತ್ಯ .ಅಧ್ಯನವೆಂದರೆ ಕೇವಲ ವೇದಿಕೆಯಲ್ಲಿ ಚರ್ಚಿಸುವುದಲ್ಲ ,ಎಲ್ಲ ಜನಪದ ಪ್ರಕಾರಗಳನ್ನು ಆಯಾಯ ಮೂಲ ಜನರಿಂದ ಅಧ್ಯಯನ ಮಾಡಿ ಮುಂದಿನ ಪೀಳಿಗೆಗೆ ತಲುಪಿಸುವುದು ಇಂದಿನ ತುರ್ತುಗಳಲ್ಲಿ ಒಂದಾಗಿದೆ ಜಾನಪದ ಆಧುನಿಕತೆಯ ವಿರೋಧಿಯಲ್ಲ ,ಜಾನಪದ ಅಧ್ಯಯನವು   ಕನ್ನಡ ಭಾಷಾ ಅಭಿವೃದ್ಧಿಗೆ , ಜನತಾ ಸಂಸ್ಕೃತಿಯ ಶೋಧನೆಗೆ ,ಜಾನಪದ ಪ್ರಕಾರಗಳ ಉಳಿಕೆಗೆ  ಪರ್ಯಾನಯ ಜ್ಞಾನ ಚಿಂತನೆಗೆ  ಮಹತ್ವದ ಕೊಡುಗೆಯನ್ನು ಕೊಡುತ್ತದೆ
.ಈ ನಿಟ್ಟಿನಲ್ಲಿ 6 ಮಾರ್ಚ್ 2015 ರಂದು ಕನ್ನಡ ಜಾನಪದ ಪರಿಷತ್ ಹುಟ್ಟಿಕೊಂಡಿತು .ಒಂದು ವರ್ಷದ ಅವಧಿಯಲ್ಲಿ ನೆಕ ಕಾರ್ಯಕ್ರಮಗಳನ್ನು ಯೋಜನೆ ಮಾಡಿ ಜನಪದ ಸಂಸ್ಕೃತಿ ಕಲೆ ಪ್ರಕಾರಗಳ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ
    ಜಾನಪದ ಎಂದರೆ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ವಿರುದ್ದ ಎಂಬ ನಂಬಿಕೆ ಜನರಲ್ಲಿ ಬಲವಾಗಿ ಬೇರೂರಿದೆ. ಹಾಗೆಯೇ ದಾಖಲೀಕರಣ ಮೂಲಕ ಮುಂದಿನ ಜನಾಂಗಕ್ಕೆ ಕೂಡಿಡುವುದು ಎಂಬ ಸ್ಥಾಪಿತ ತಿಳುವಳಿಕೆಯ ಚೌಕಟ್ಟಿನ ಆಚೆಗೂ ಜಾನಪದವನ್ನು ವಿಶಾಲ ಮನೋಭಾವದಲ್ಲಿ ಅರ್ಥೈಸಿಕೊಳ್ಳುವ ಅಗತ್ಯವಿದೆ.  ಮೌಖಿಕ ಪರಂಪರೆಯು ಆಯಾಯ ಬುಡಕಟ್ಟು ಸಮುದಾಯಗಳ ಮೂಲವನ್ನು ತಿಳಿಯಲು ಇರುವ ದೊq ಆಕಾರ ಎಂಬುದು ನಿಜ. ಜಾನಪದವು ಒಂದು ಸಂಸ್ಕøತಿಯು ಮುಗಿದು ಪೂರ್ತಿಯಾಗುವ ಅವಸ್ಥೆಯಲ್ಲ, ಜೀವಂತವಾಗಿ ಇರುವ ಅವಸ್ಥೆ ಎಂಬುದು ವಿದ್ವಾಂಸರು ಸ್ಪಷ್ಟಪಡಿಸಿದರು.  ವಸ್ತು ವರ್ಣನೆ, ಸಂಗೀತ ಪಾತ್ರ, ಸನ್ನಿವೇಶ ಸಂಯೋಜನೆಯೆಲ್ಲ ಸಾಹಿತ್ಯಕೃತಿಯಲ್ಲಿರುತ್ತದೆ. ಜನಪದ ಕೆಲೆ ಒಂದು ಜನಾಂಗದ ಕಲೆ.  ಎಲ್ಲ ಕಲೆಗಳ ತಾಯಿಬೇರು
       ಆಧುನಿಕರಣ, ಜಾಗತಿಕರಣದ ಇಂದಿನ ಸಂದರ್ಭದಲ್ಲಿ ನಶಿಸುತ್ತಿರುವ ಜಾನಪದ ಸಾಹಿತ್ಯ, ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ಅನ್ನು ಅಸ್ತಿತ್ವಕ್ಕೆ ತರಲಾಗಿದೆ. ಕನ್ನಡ ನಾಡಿನ ಪ್ರತಿಯೊಂದು ಹಳ್ಳಿಯಲ್ಲಿಯೂ ಇರುವ ಜನಪದ ಕಲೆ, ಸಾಹಿತ್ಯ, ಜನಪದ ಸಾಮಗ್ರಿಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಜಾಗೃತಿ ಹಾಗೂ ಸಂಗ್ರಹ ಕಾರ್ಯಕ್ರಮಗಳನ್ನು ಪರಿಷತ್ತಿನ ಮೂಲಕ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ.
     ತಲೆಮಾರಿನಿಂದ ತಲೆಮಾರಿಗೆ ಜನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಜನಪದ ಕಲೆಗಳ ತರಬೇತಿಯನ್ನು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಜನಪದ ಕಲೆಗಳನ್ನು ಕಲಿಯುವವರಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿದೆ, ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯಾದಾದ್ಯಂತ ಉಚಿತ ತರಬೇತಿ ನೀಡಿ, ಅವರು ಕಲಿತಿರುವ ಕಲೆಗಳನ್ನು ಪ್ರದರ್ಶಿಸಲು ಸೂಕ್ತ ಅವಕಾಶಗಳನ್ನು ಪರಿಷತ್ತಿನ ಮೂಲಕ ಕಲ್ಪಿಸಿಕೊಡಲಾಗುತ್ತಿದೆ.
     ಜನಪದ ಸಲಕರಣೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಅವರು ಇವರು ಗ್ರಾಮಗಳಲ್ಲಿ  ದೊರೆಯುವ ಪ್ರಾಚೀನ ವಸ್ತುಗಳನ್ನು, ಗಾದೆ, ಒಗಟು, ಒಡಪು, ಅಡುಗೆ, ವೈದ್ಯ, ನಂಬಿಕೆ, ಹಬ್ಬ ಹರಿದಿನ, ಜನಪದ ಕಥೆ, ವೇಷಭೂಷಣ, ವೃತ್ತಿ, ಬದುಕು ಕುರಿತು ಈಗಾಗಲೇ ರಾಜ್ಯಾದ್ಯಂತ ದಾಖಲೀಕರಣ ಕಾರ್ಯವನ್ನು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ನಡೆಸಲಾಗುತ್ತಿದೆ. ಇದರ ಜೊತೆಗೆ ಜನಪದ ವಸ್ತುಗಳ ಮಹತ್ವವನ್ನು ತಿಳಿಸಿಕೊಡಲಾಗುತ್ತಿದೆ.
     ಕನ್ನಡ ಜಾನಪದ ಪರಿಷತ್ತಿನ ಮೂಲಕ ಜಾನಪದ ಪ್ರಪಂಚ ಎಂಬ ಪ್ರಶಸ್ತಿಯನ್ನು ಈ ಸಾಲಿನಿಂದ ನೀಡಲಾಗುತ್ತಿದೆ. ಜನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
     ಮಠದಿಂದ ಮಠಕ್ಕೆ ಜಾನಪದ, ಹಾಸ್ಟೆಲ್‍ಗಳಿಂದ ಹಾಸ್ಟೆಲ್‍ಗೆ ಜಾನಪದ, ನಮ್ಮ ನಡಿಗೆ ಜಾನಪದದ ಕಡೆಗೆ ಎಂಬ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಪರಿಷತ್ತಿನ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ.
       ಪ್ರತೀ ವರ್ಷವೂ ರಾಜ್ಯ ಮಟ್ಟದ ಜಾನಪದ ಕಾವ್ಯಗಾಯನ, ಗಾಳಿಪಟ ಹಾಗು ಜನಪದ ಕ್ರೀಡೆಗಲ ಸ್ಪೆರ್ಧೆಯನ್ನು ಏರ್ಪಡಿಸುತ್ತಿದೆ. ಶಾಲಾ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕ್ಕೋತ್ತರ ಪದವಿ ಅಧ್ಯಯನ ನಿರತ ವಿದ್ಯಾರ್ಥಿಘಳಿಗಾಗಿ ಜಾನಪದ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಲಿದ್ದೇವೆ.
ಕರಾವಳಿಯ ಕಡಲ ತೀರದಲ್ಲಿ ಪ್ರತೀ ವರ್ಷವೂ ಜಲಜನಪದೋತ್ಸವ ಎಂಬ ಶಿರ್ಷಿಕೆಯಡಿಯಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.
     ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯ ತಾಳೆಕೆರೆಯ ಬಳಿ 10 ಎಕರೆ ಸ್ಥಳದಲ್ಲಿ ಜಾನಪದ ಪ್ರಪಂಚ ಎಂದು ಸ್ಥಾಪಿಸಲಾಗುತ್ತಿದೆ. ಇಲ್ಲಿ ಜನಪದ ಕಲೆಗಳ ತರಬೇತಿ, ಜನಪದ ವಾಚನಾಲಯ, ಜನಪದ ಸಂಗ್ರಹಾಲಯ, ಚರ್ಮ ವಾದ್ಯ ತಯಾರಿಕಾ ಕೇಂದ್ರ, ಜಾನಪದ ರಂಗಮಂದಿರ ಮುಂತಾದ ಸೌಲಭ್ಯಗಳು ಇಲ್ಲಿ ಇರಲಿವೆ.
     ಕನ್ನಡ ಜಾನಪದ ಪರಿಷತ್ತಿನ ಈಗಾಗಲೇ 21 ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಮುಂದುವರಿದು ತಾಲ್ಲೂಕು, ಹೋಬಳಿ ಹಾಗೂ ಗ್ರಾಮ ಘಟಕಗಲನ್ನು ರಚಿನಾ ಹಂತದಲ್ಲಿದೆ. ಈಗಾಗಲೇ ಹಲವು ವಿಶ್ವವಿದ್ಯಾನಿಲಯಗಳಲ್ಲೂ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಿಂದ ಹೊರಗೂ ಪರಿಷತ್ತಿನ ವತಿಯಿಂದ ಘಟಕಗಳನ್ನು ಸ್ಥಾಪಿಸಲಾಗುವುದು.
     ಕನ್ನಡ ಜಾನಪದ ಪರಿಷತ್ತಿನ ಮೂಲಕ ಜನಪದ ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಪ್ರಕಟಿಸಲಾಗುವುದು. ರಾಜ್ಯದಲ್ಲಿರುವ ಜನಪದ ಕಲಾವಿದರನ್ನು ಗುರುತಿಸಿ ಅವರ ಗಣತಿ  ಕಾರ್ಯವನ್ನು ಮಾಡಲಾಗುತ್ತಿದೆ. ಮಾಶಾಸನ ತಲುಪದ ಕಲಾವಿದರಿಗೆ ಮಾಶಾಸನವನ್ನು ಕೊಡಿಸುವಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
       ಮುಂಬರುವ ದಿನಗಳಲ್ಲಿ ಕಾಲೇಜುಗಳಲ್ಲಿ ಜಾನಪದ ಕಲಾಪ್ರಕಾರ, ಅದರ ಸಂಸ್ಕøತಿಕ ಹಿನ್ನೆಲೆÀ ಕುರಿತಾದ ವಿಚಾರ ಸಂಕಿರಣ, ಕಮ್ಮಟ ಹಾಗೂ ಸಂವಾದಗಳನ್ನು, ಅಂತರ ರಾಜ್ಯ ಜಾನಪದ ವಿನಮಯ ಕಾರ್ಯಕ್ರಮ, ಶಾಲಾ ಕಾಲೇಜುಗಳಲ್ಲಿ ಜನಪದಕ್ಕೆ ಸಂಬಂಧಿಸಿದಂತೆ ಜನಪದ ಹಬ್ಬ, ಜನಪದ ಜಾತ್ರೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರೊಂದಿಗೆ ರಾಗೀ ಬೀಸೋ ಸ್ಪರ್ಧೆ, ಮುದ್ದೆ ತಿನ್ನುವ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
    ಈ ಶೈಕ್ಷಣಿಕ ಸಾಲಿನಲ್ಲಿ ಗೊರವರ ಸಮಾವೇಷ, ಕಿನ್ನರಿ ಜೋಗಿಗಳ ಹಾಗೂ ಸುಡುಗಾಡು ಸಿದ್ದರ ಮೇಳವನ್ನು, ಮಕ್ಕಳ ಜಾನಪದ ಹಬ್ಬ, ಮಹಿಳಾ ಜಾನಪದ ಸಮ್ಮೇಳನಗಳನ್ನು ಆಯೋಜಿಸುವುದು. ಇದರೊಂದಿಗೆ ಕರ್ನಾಟಕದ ಜಾನಪದ ಮಹಾಕಾವ್ಯಗಳ ಕುರಿತಾದ ಅಧ್ಯಯನ, ದಾಖಲೀಕರಣ ಹಾಗೂ ಕ್ಷೇತ್ರ ಕಾರ್ಯವನ್ನು ಕೈಗೋಳ್ಳಲಿದ್ದೇವೆ.
     ಕನ್ನಡ ಜಾನಪದ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿ ಟಿ.ಕೆ. ಗೌಡ, ಕಾರ್ಯಾಧ್ಯಕ್ಷರಾಗಿ ಡಾ.ಎಸ್.ಬಾಲಾಜಿ, ಕಾರ್ಯದರ್ಶಿಯಾಗಿ ವಿಠುಲ್ ಪೆರುಮನೆ, ಖಜಾಂಚಿಯಾಗಿ ಡಾ.ಕನಕತಾರ, ಸಂಘಟನಾ ಕಾರ್ಯದರ್ಶಿಯಾಗಿ ಕಮಲಾಪುರಕರ್ ರವಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.                                                                 ಯಕ್ಷಗಾನ
                                                               ಕಂಬಳ
                                                                      ಗೊರವ ಕುಣಿತ


                                                                      ಕಂಸಾಳೆ                                                               ಪೂಜಾ ಕುಣಿತ
                                                      ಸೋಮನ ಕುಣಿತ
                                                          ಸುಗ್ಗಿ ಕುಣಿತ
                                                                       ವೀರ ಗಾಸೆ
                                                                   ಆಟಿ ಕಳೆಂಜ
                                                                   ಕಂಗೀಲು
                                                      ಉಮ್ಮತ್ತಾಟ್
                                        ನವರಾತ್ರಿ ಹುಲಿ ವೇಷ
                                                             ಜಾಲ ಪೊಲಿ
                                                            ಡೊಳ್ಳು ಕುಣಿತ
 ಚಿತ್ರಗಳು:,ಕನ್ನಡ ಜಾನಪದ ಪರಿಷತ್ ,ದಯಾನಂದ ನೀರೆ (ಕಂಬಳ ), ಡಾ.ಲಕ್ಷ್ಮೀ ಜಿ ಪ್ರಸಾದ ಹಾಗೂ ಅಂತರ್ಜಾಲ

-- ಕನ್ನಡ ಜಾನಪದ ಪರಿಷತ್